 ಚಿತ್ರ: ಏಳು ಸುತ್ತಿನ ಕೋಟೆ
 ಗಾಯನ: ರತ್ನಮಾಲ ಪ್ರಕಾಶ್, ಎಸ್.ಪಿ.ಬಾಲಸುಬ್ರಹ್ಮಣ್ಯಂ
 ಸಾಹಿತ್ಯ: ದೊಡ್ಡರಂಗೇಗೌಡ
 ಸಂಗೀತ: ಎಲ್.ವೈದ್ಯನಾಥನ್

ಸಂತಸ ಅರಳುವ ಸಮಯ
ಮರೆಯೋಣ ಚಿಂತೆಯ
ಇದು ರಮ್ಯ ಚೈತ್ರಕಾಲ |೨|
ಸುಂದರ ನುಡಿಯಿದು ಗೆಳತಿ
ಸಂಗಾತಿಯಾಗುವಾ
ಶೃಂಗಾರ ಕಾವ್ಯ ರಮ್ಯ |೨|  ||ಪಲ್ಲವಿ||

ಮಂಜಿನೆಡೆಯಲಿ ಮುಂಜಾನೆ ಬಣ್ಣ
ಹೃದಯದೊಳಗೆ ಸಂತೋಷ ತಾನ
ಮಂಜಿನೆಡೆಯಲಿ ಮುಂಜಾನೆ ಬಣ್ಣ
ಹೃದಯದೊಳಗೆ ಸಂತೋಷ ತಾನ

ಬಿರಿದ ಹೂವು, ನಗುವ ತಾಣ |೨|
ಮಿನುಗೊ ರಂಗು ಭೂಮಿ ಬಾನ
ಇದು ರಮ್ಯ ಚೈತ್ರ ಕಾಲ |೨|

ಸುಂದರ ನುಡಿಯಿದು ಗೆಳತಿ 
ಸಂಗಾತಿಯಾಗುವಾ
ಶೃಂಗಾರಕಾವ್ಯ ರಮ್ಯ |೨|

ಚಿಂತೆಯಿರುವ ಮನದಲ್ಲಿ ಮೌನ
ದೂರಸರಿಸಿ ಮರೆಯಾಗಿಸೋಣ
ನಲಿವು ನೋವು ಬರಲಿ ಏನು |೨|
ಬಾಳು ನಮ್ಮ ಮಧುರ ಗಾನ.....
ಶೃಂಗಾರಕಾವ್ಯ ರಮ್ಯ |೨|

ಕಂಗಳ ಬೆಳಕು ಬೆಳದಿಂಗಳಾಗಿ
ತಿಂಗಳ ಬೆಳಕು ಅನುರಾಗವಾಗಿ
ಕುಸುಮರಾಶಿ ಹರುಷವಾಗಿ
ನಲಿಯುವಾಗ ಮಿಡಿದ ರಾಗ.....
ಇದು ರಮ್ಯ ಚೈತ್ರ ಕಾಲ |೨|

ಸಂತಸ ಅರಳುವ ಸಮಯ
ಮರೆಯೋಣ ಚಿಂತೆಯ
ಇದು ರಮ್ಯ ಚೈತ್ರಕಾಲ |೨|

ವರ್ಗ: ಕನ್ನಡ ಚಿತ್ರಸಾಹಿತ್ಯ
ವರ್ಗ:ದೊಡ್ಡರಂಗೇಗೌಡ ಸಾಹಿತ್ಯ
ವರ್ಗ: ಏಳು ಸುತ್ತಿನ ಕೋಟೆ ಚಿತ್ರ
ವರ್ಗ:ರತ್ನಮಾಲ ಪ್ರಕಾಶ್ ಗಾಯನ
ವರ್ಗ:ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾಯನ